ಆತ್ಮೀಯ ರಿಚ್ಮಂಡ್ ಕನ್ನಡ ಸಂಘದ ಸದಸ್ಯರೇ / Dearest Richmond Kannada Sangha members, 

ಹಾದಿ ತೋರಿದ ಹಿರಿಯರ ಮರೆಯಬೇಡವೋ ಮನುಜ ಮರೆಯಬೇಡವೋ.....ನಮ್ಮ ದಿಗ್ಗಜರಾದ ಹಿರಿಯರುಗಳೆಲ್ಲ ಸೇರಿ "ರಿಚ್ಮಂಡ್ ಕನ್ನಡ ಸಂಘ" ಹುಟ್ಟು ಹಾಕಿ ಇಂದಿಗೆ ೨೫ ವರ್ಷಗಳು ಕಳೆದವು ಅಂದ್ರೆ ನಮಗೆಲ್ಲ ಬಹಳ ಹೆಮ್ಮೆ ಮತ್ತು ಸಂಭ್ರಮದ ವಿಷಯ. ನಮ್ಮಂಥ ವಲಸಿಗರನ್ನ ಒಗ್ಗೂಡಿಸಿ ಒಂದೇ ಮಳಿಗೆಯಡಿ ಸೇರಿಸಿ ಎಲ್ಲ ಹಬ್ಬ ಆಚರಣೆಯನ್ನ ಒಟ್ಟಾಗಿ ಮಾಡೋ ಹಾಗೆ ಮಾಡಿದ ಸಂಸ್ಥಾಪಕರಿಗೆ, ಸಂಸ್ಥೆಯ ಏಳಿಗೆಗೆ ಶ್ರಮಿಸಿದ ಹಿಂದಿನ ಮತ್ತು ಇಂದಿನ ಕಾರ್ಯಕಾರಿ ಸಮಿತಿಯ ಮತ್ತು ನಿರ್ದೇಶಕ ಮಂಡಳಿಯವರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು.

ನಾವಾಡುವ ನುಡಿಯೇ ಕನ್ನಡ ನುಡಿ, ಚಂದದ ನುಡಿ...
ಹಚ್ಛೇವು ಕನ್ನಡದ ದೀಪ, ಹಚ್ಛೇವು ಕನ್ನಡದ ದೀಪ...
ಮೈಸೂರು ದಸರಾ ಎಷ್ಟೊಂದು ಸುಂದರ... 
ಬೆಳಕನು ಚೆಲ್ಲಿ ಬಂದೆ ಬಂತು ದೀಪಾವಳಿ....
ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ....

ಎಷ್ಟೇ ಹಾಡು ಹೇಳಿದರು ಕನ್ನಡ ಒಲುಮೆ ಚಿಲುಮೆ ಯಾವತ್ತೂ ಕಮ್ಮಿ ಆಗಲ್ಲ. ಬನ್ನಿ ನಿಮ್ಮ ಕೈ ಜೋಡಿಸಿ ನವೆಂಬರ್ ೮ ನೇ ತಾರೀಕು ಶನಿವಾರ ರಿಚ್ಮಂಡ್ ಕನ್ನಡ ಸಂಘದ ಆಚರಣೆಯ "ಕನ್ನಡ ರಾಜ್ಯೋತ್ಸವ ಹಾಗು ದೀಪಾವಳಿ" ಹಬ್ಬದಲ್ಲಿ ಪಾಲ್ಗೊಂಡು ಸುಮಧುರ ಸಂಜೆಯಲ್ಲಿ "ಡಾಕ್ಟರ್ ಶಮಿತಾ ಮಲ್ನಾಡ್ ಮತ್ತು ತಂಡದವರ" ಮಧುರ ಗೀತೆಗಳನ್ನ ಕೇಳಿಸಿಕೊಂಡು ಒಳ್ಳೆ ರಾತ್ರಿ ಭೋಜನ ಮಾಡ್ಕೊಂಡು ಆನಂದ ಅನುಭವಿಸೋಣ. ನಿಮ್ಮೆಲ್ಲರ ಬರುವಿಕೆಯನ್ನ ಕಾಯ್ತಾ ಇರ್ತೀವಿ.

ನೊಂದಣೆಯನ್ನ ಮಾಡಲು Event Registration RSVP Link -   https://forms.fillout.com/t/2x6zv4foB5us (ನೊಂದಾಯಿಸಲು ಕೊನೆಯ ದಿನಾಂಕ - October 31, 2025)
ಕಾರ್ಯಕ್ರಮಗಳಲ್ಲಿ ಭಾಗವಹಿಸಲು Program Registration Link -  https://forms.gle/uMZTnL1VaSTFdR3c7 (ಕಾರ್ಯಕ್ರಮಗಳಲ್ಲಿ ನೊಂದಾಯಿಸಲು ಕೊನೆಯ ದಿನಾಂಕ October 31, 2025)

Event Date - November 8, 2025
Place - Hindu Center of Virginia, 6051 Springfield Rd, Glen Allen, VA 23060
Program Start Time - From Evening 4 PM
Local Programs - 4 PM to 6.30 PM
Dinner - From Evening 6.30 PM to 7.45 PM
Prime Show -By Dr. Shamita Malnad and Team "First Ever Female Band Performance in America" From Night 8 PM

We sincerely convey a “BIG THANK YOU” on behalf of the entire crew of 2025 EC committee for for making Yugadi, Woman’s Day and Picnic 2025 a grand success. We are now getting ready and are excited to invite you and your family members to participate in Cultural Performances on the stage for Kannada Rajyotsava and Deepavali 2025 celebrations. We look forward to your support in making it yet another grand successful event for Richmond Kannada Community. Based on overwhelming responses from our previous events, we are expecting a high volume of entries. Therefore, we sincerely request you to send your program entries before 31st of October 2025 via the google form at the following program registration link: https://forms.gle/uMZTnL1VaSTFdR3c7

Please RSVP for the event by clicking the following link - https://forms.fillout.com/t/2x6zv4foB5us