ಆತ್ಮೀಯ ರಿಚ್ಮಂಡ್ ಕನ್ನಡ ಸಂಘದ ಸದಸ್ಯರೇ  / Dearest Richmond Kannada Sangha members,



ಯುಗದ ಆದಿಯಲ್ಲಿ ಪ್ರಪಂಚದಲ್ಲಿ ಎಲ್ಲಿಲ್ಲದ ಸಂಭ್ರಮ
ಬೇವಿನ ಕಹಿಯು ಬೆಲ್ಲದ ಸಿಹಿಯಲ್ಲಿ ಬೆರೆತಾಗ ಸಂಭ್ರಮ
RKS ಕನ್ನಡಿಗರ ಸ್ನೇಹ ಪರ್ವವು ಅಜರಾಮರ ಮತ್ತು ನಿರಂತರ

"ಶತಾಯುರ್ವಜ್ರದೇಹಾಯಾ  ಸರ್ವಸಂಪತ್ಕರಾಯಚ, ಸರ್ವಾರಿಷ್ಠ ವಿನಾಶಾಯ ನಿಂಬಕ ದಳಂ ಭಕ್ಷಣಂ" ಅರ್ಥಾತ್ "ನೂರಾರು ವರ್ಷಗಳು ಆರೋಗ್ಯ ಮತ್ತು ಐಶ್ವರ್ಯವನ್ನು ಕಾಪಾಡಿಕೊಂಡು ಸರ್ವ ಅರಿಷ್ಠಗಳನ್ನು ದೂರಮಾಡಿಕೊಳ್ಳಲು ಬೇವಿನ ಎಲೆಯನ್ನು ಬೆಲ್ಲದೊಂದಿಗೆ ಮಿಶ್ರಣ ಮಾಡಿ ಸೇವಿಸಬೇಕು" ಎಂದು ನಮ್ಮ ಪೂರ್ವಿಕರು ಹಾಗು ಹಿರಿಯರು ಹೇಳಿದ್ದಾರೆ.
 

ಓಂ ಶ್ರೀ ಅನ್ನಪೂರ್ಣಾಯೈ ನಮಃ


ಆಹ್ಹ್ಹಹ್ಹ ಹ್ಹಹ್ಹಹ ....

ಯುಗಾದಿ ಭೋಜನವಿದು ಅಹ್ಹ ಹ್ಹ ಹ್ಹಾ

ಯುಗಾದಿ ಭೋಜನವಿದು, ವೈವಿಧ್ಯ ಭಕ್ಷ್ಯಗಳಿವು

ಕನ್ನಡಿಗರಿಗೆ ಔತಣವಿದು, ನಿಮಗಾಗಿ ಬಂತು ಬಂತು 

ಓಹೋ! ರೇ!  ಗಸಗಸೆ ಪಾಯಸ || ಆಹಾ! ರೇ ! ಬೇಳೆ ಸೌತೆಕಾಯಿ||

ಓಹೋ! ರೇ! ಕಡ್ಲೆಕಾಯ್ || ಭಲಾ! ರೇ!  ಕೋಸಂಬರಿ....

ಓಹೋ! ರೇ!  ಹುರಳಿಕಾಯಿ || ಆಹಾ! ರೇ !  ತೊಂಡೆಕಾಯಿ

ಭಲಾ! ರೇ!   ಪಲ್ಯಗಳಿಲ್ಲಿ...

ಓಹೋ! ರೇ!  ತರಕಾರಿ ಕೂಟು || ಆಹಾ! ರೇ !  ಒಬ್ಬಟ್ ಸಾರು

ಭಲಾ! ರೇ!   ಮಾವಿನಕಾಯ್ ಚಿತ್ರಾನ್ನ...

ಓಹೋ! ರೇ!  ಆಂಬೋಡೆಯು || ಜೊತೇಲಿ ಬೇಳೆ ಒಬ್ಬಟ್ಟು 

ಆಹಾ! ರೇ !  ಅನ್ನಮೊಸರು

ಭಲಾ! ರೇ!   ಬಾಳೆಲೆ ಊಟಾ......|| ಆಹ್ಹ್ಹಹ್ಹ ಹ್ಹಹ್ಹಹ ....


ಇವೆಲ್ಲಾ ಸಾಕು ಎನಗೆ || ಮತ್ತೇನು ಬೇಕು ನಮಗೆ

ಆಹ್ಹ್ಹಹ್ಹ ಹ್ಹಹ್ಹಹ .... || ಆಹ್ಹ್ಹಹ್ಹ ಹ್ಹಹ್ಹಹ .... || ಆಹ್ಹ್ಹಹ್ಹ ಹ್ಹಹ್ಹಹಾ ....


೨೦೨೫ನೇ ಇಸವಿಯ ನೂತನ ಸಂವತ್ಸರವಾದ ವಿಶ್ವಾವಸು ನಾಮ ಸಂವತ್ಸರದ ಆದಿಯಲ್ಲಿ ಎಲ್ಲ ರಿಚ್ಮಂಡ್ ಕನ್ನಡ ಸಂಘದ ಬಂಧು ಬಾಂಧವರಿಗೆ ಕಾರ್ಯಕಾರಿ ಸಮಿತಿಯು ಹೃದಯಪೂರ್ವಕ ಆಹ್ವಾನವನ್ನು ಈ ಮೂಲಕ ಕಳುಹಿಸುತ್ತಿದ್ದೇವೆ.

ಯುಗಾದಿ ಹಬ್ಬದ ಸುದಿನ ಏಪ್ರಿಲ್ 12, 2025 ರಂದು ಸರಿಯಾಗಿ ಸಂಜೆ 4 ಗಂಟೆಯಿಂದ ಪ್ರಾರಂಭಿಸಿ ಯುಗಾದಿ ಹಬ್ಬದ ಸಂಭ್ರಮವನ್ನು ಎಲ್ಲರೂ ಒಟ್ಟಿಗೆ ಸೇರಿ ಹಾಡಿ, ಕುಣಿದು ತಿಂದು ಕಾರ್ಯಕ್ರಮಗಳನ್ನು ಕಣ್ಣಿಗೆ ತುಂಬಿಸಿಕೊಳ್ಳೋಣ. ಇನ್ಯಾಕೆ ತಡ RSVP ಮಾಡಿ ನಿಮ್ಮ ನೋಂದಣಿ ಧೃಡೀಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.


ರಿಚ್ಮಂಡ್ ಸ್ಥಳೀಯ ಕಾರ್ಯಕ್ರಮಗಳು - ಸಂಜೆ 4.00 ರಿಂದ 6.30 ಗಂಟೆ ವರೆಗೆ

ಉಪಹಾರ - ಸಂಜೆ 4.30 ರಿಂದ 5.00 ವರೆಗೆ 

ರಾತ್ರಿ ಭೋಜನ - ರಾತ್ರಿ 6.30 ರಿಂದ 8 ಗಂಟೆ ವರೆಗೆ

ಪ್ರಧಾನ ಪ್ರದರ್ಶನ - ರಾತ್ರಿ 8 ಗಂಟೆ ಇಂದ 10 ಗಂಟೆ ವರೆಗೆ - Boston Brothers

ಸ್ಥಳ - Hindu Center of Virginia Auditorium, 6051 Springfield Road, Glen Allen, VA 23060.

We are pleased to announce the Banana Leaf dinner for Yugadi Festival Celebration for our Richmond Kannada Members.  We cordially invite our RKS family members to participate in cultural performances (group dance, skit, mimicry, fashion show etc.) on the big stage of YUGADI 2025 which is held on Saturday, April 12th, 2025.

Richmond Local Talent programs - Evening 4.00 pm to 6.30 pm

Snacks - Evening 4.30 pm to 5.00 pm

Dinner - 7 pm to 8 pm

Prime Show - 8 pm to 10 pm - Boston Brothers

Venue – Hindu Center of Virginia Auditorium, 6051 Springfield Road, Glen Allen, VA 23060.